ಗೌರವ್ ಖನ್ನಾ ಒಬ್ಬ ಭಾರತೀಯ ಟಿವಿ ನಟ ಹಾಗು ರೂಪದರ್ಶಿಯಾಗಿದ್ದಾರೆ. ಟಿವಿ ಧಾರಾವಾಹಿಗಳಾದ ಕುಂಕುಮ್, ಲವ್ ನೇ ಮಿಲಾ ದಿ ಜೋಡಿ, ಮತ್ತು ಯೆಹ್ ಪ್ಯಾರ್ ನಾ ಹೋಗಾ ಕಮ್ ನಲ್ಲಿಯ ಪಾತ್ರಗಳಿಗೆ ಪ್ರಸಿದ್ಧಿ ಹೊಂದಿದ್ದಾರೆ. == ವೃತ್ತಿ ಜೀವನ == ಗೌರವ್ ಖನ್ನಾ ತಮ್ಮ ವೃತ್ತಿ ಜೀವನವನ್ನು ಟಿವಿ ಜಾಹೀರಾತುಗಳ ಮೂಲಕ ಪ್ರಾರಂಭಿಸಿದರು. ಆದರೆ ಇವರಿಗೆ ಹೆಸರು ತಂದುಕೊಟ್ಟಿದ್ದು ಸ್ಟಾರ್ ಇಂಡಿಯಾ ವಾಹಿನಿಯ ಸುಪ್ರಸಿದ್ಧ ಕುಂಕುಮ್ ಧಾರಾವಾಹಿಯಲ್ಲಿನ ಶರ್ಮನ್ ವಾಧ್ವಾ ಪಾತ್ರ. ರುಹಾನ್ ಓಬೆರಾಯ್ ಆಗಿ ನಟಿಸಿದ ಮೇರೀ ಡೋಲೀ ತೇರೇ ಆಂಗನಾ, ಇವರು ನಾಯಕರಾಗಿ ನಟಿಸಿದ ಮೊದಲ ಧಾರಾವಾಹಿಯಾಗಿದೆ. ಟಿವಿ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ, ಖನ್ನಾ ಹಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 9X ವಾಹಿನಿಯ ಜಲ್ವಾ ಫ಼ೋರ್ ೨ ಕಾ ೧, ಡ್ಯಾನ್ಸಿಂಗ್ ಕ್ವೀನ್ ಹಾಗೂ ನಚ್ಲೇ ವೆ ವಿತ್ ಸರೋಜ್ ಖಾನ್‍ ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು ನಿರೂಪಿಸಿದ್ದಾರೆ. ಆಕಾಂಕ್ಷ ಚಮೋಲಾ ಅವರನ್ನು ಗೌರವ್ ೨೦೧೬ರ ನವೆಂಬರ್‍ನಲ್ಲಿ ವಿವಾಹವಾಗಿದ್ದಾರೆ. == ಟಿವಿ ಕಾರ್ಯಕ್ರಮಗಳು == == ಉಲ್ಲೇಖಗಳು ==